Tuesday, July 30, 2013

ನೆನೆವುದೆನ್ನ ಮನಂ ಅಂಕೋಲೆಯ‌ ಸೂರ್ಯೋದಯ‍-ಸೂರ್ಯಾಸ್ತಗಳಂ..!!

ಕನ್ನಡದ ಆದಿಕವಿ ಪಂಪ ತನ್ನ "ವಿಕ್ರಮಾರ್ಜುನ ವಿಜಯ"ದಲ್ಲಿ ಸೂರ್ಯೊದಯ‍-ಸೂರ್ಯಾಸ್ತಗಳೆರಡನ್ನು ತನ್ನ ಕಾವ್ಯವಸ್ತುವಿಗೆ ಬೇಕಾದಂತೆ ಸಮರ್ಥವಾಗಿ ಬಳಸಿಕೊಂಡಿದ್ದಾನೆ. ಅದರಲ್ಲೂ ಕರ್ಣನ ಜೀವನದ ಪ್ರಮುಖ ಘಟ್ಟಗಳನ್ನು ಚಿತ್ರಿಸುವಾಗ. ಅದಕ್ಕೆ ಕಾರಣ ಕರ್ಣನು ಸೂರ್ಯನ ಪುತ್ರನೆಂಬುದು.ಅದೇ ರೀತಿ ಕುಮಾರವ್ಯಾಸ, ಕುವೆಂಪು, ಬೇಂದ್ರೆ ಎಲ್ಲರೂ ಸೂರ್ಯೋದಯ‍-ಸೂರ್ಯಾಸ್ತಗಳನ್ನು ತಂತಮ್ಮ ಭಾವಕ್ಕೆ ತಕ್ಕಂತೆ ಚಿತ್ರಿಸಿದ್ದಾರೆ, ಪ್ರತಿಮೆಗಳನ್ನು ಕಟ್ಟಿಕೊಟ್ಟಿದ್ದಾರೆ.

ಈ ರೀತಿ ಕವಿಹೃದಯಕ್ಕೆ ಸ್ಪೂರ್ತಿ ಒದಗಿಸುವ ನೈಸರ್ಗಿಕ ಕ್ರಿಯೆಗಳಲ್ಲಿ ಬಹುಶಃ ಸೂರ್ಯೋದಯ‍-ಸೂರ್ಯಾಸ್ತಗಳು ಮೊದಲು ನಿಲ್ಲುತ್ತವೆ. ನಮ್ಮೆಲ್ಲರನ್ನು ತನ್ನ ಕಿರಣಗಳಿಂದ ಸಲುಹುವ ಸೂರ್ಯ ಕೇವಲ ಶಕ್ತಿಯ ಆಕರವಾಗಿರದೆ ಮನಸ್ಸನ್ನು ಹಿಗ್ಗಿಸುವ ಭಾವಚೇತನವೂ ಆಗಿದ್ದಾನೆ. 

ಕಾಡು ಕಡಲೆರಡು ತುಂಬಿರುವ ತಾಲೂಕು ನಮ್ಮ ಅಂಕೋಲೆ.. ಆದ ಕಾರಣ ಸುಂದರ ಸೂರ್ಯೋದಯ‍-ಸೂರ್ಯಾಸ್ತಗಳನ್ನು ನೋಡಲು ಜಾಗಗಳ ಕೊರತೆಯಿಲ್ಲ. ಸೂರ್ಯೋದಯ‍ ಸಾಮಾನ್ಯ ಬೆಟ್ಟದಾಚೆಯಾದರೆ, ಸೂರ್ಯಾಸ್ತವನ್ನು ಬೆಟ್ಟದಾಚೆ ಅಥವಾ ಸಮುದ್ರದಲ್ಲಿ ನೋಡಬಹುದು. ಸಂಜೆ ಆರಾದರೆ ನಾನು ಸೂರ್ಯಾಸ್ತ ನೋಡಲು ಹೋಗುವ ಸಾಮಾನ್ಯ ಜಾಗವೆಂದರೆ ನಮ್ಮೂರ ಬೊಮ್ಮಯ್ಯ ದೇವರಗುಡಿಯಿರುವ ಗುಡ್ಡ. ಸುತ್ತಲಿನ ಸುಮಾರು ಇಪ್ಪತ್ತಕ್ಕೂ ಹೆಚ್ಚಿನ ಊರುಗಳು ಇಲ್ಲಿಂದ ಕಾಣುತ್ತವೆ. ಕೆಲವೊಮ್ಮೆ ಸಮುದ್ರ ತೀರಕ್ಕೆ, ಗದ್ದೆ ಬಯಲಿಗೆ ಸೂರ್ಯ ಮುಳುಗುವುದನ್ನು ನೋಡಲು ಹೋದರೆ ಇನ್ನು ಕೆಲಬಾರಿ ನದಿಯ ತೀರಕ್ಕೆ ಹೋಗುತ್ತೇನೆ. ಕಳೆದ ಕೆಲ ವರ್ಷಗಳಿಂದ ನಮ್ಮೂರ ಸುತ್ತಮುತ್ತಲಿನ ಅನೇಕೆಡೆ ಕಂಡ ಸೂರ್ಯಾಸ್ತಗಳಿವು.


















  @ಹೊನ್ನೆಬೈಲ್ ಬೀಚ್

















@ಗಂಗಾವಳಿ ನದಿಯಲ್ಲಿರುವ ಕೂರ್ವೆ ದ್ವೀಪ‌. .ಇದು ನನ್ನ ಫೇವರಿಟ್ :-)

















@ಗಂಗಾವಳಿ ನದಿಯಲ್ಲಿರುವ ಕೂರ್ವೆ ದ್ವೀಪ‌

















@ಗಂಗಾವಳಿ ನದಿಯಲ್ಲಿರುವ ಕೂರ್ವೆ ದ್ವೀಪ‌

















@ಬೇಲೇಕೇರಿ ಬೀಚ್

















@ಸೂರ್ವೆಯ ಬೊಮ್ಮಯ್ಯ ದೇವರ ಗುಡ್ಡ‌

















@ಬೇಲೇಕೇರಿ ಬೀಚ್

















@ಬೇಲೇಕೇರಿ ಬೀಚ್

















@ಬೇಲೇಕೇರಿ ಬೀಚ್

















@ಶಿರೂರು..

@ಬೆಳಂಬಾರ‌


















@ಸೂರ್ವೆಯ ಬೊಮ್ಮಯ್ಯ ದೇವರ ಗುಡ್ಡ‌


















@ಸೂರ್ವೆಯ ಬೊಮ್ಮಯ್ಯ ದೇವರ ಗುಡ್ಡ‌

ನಾನಿಲ್ಲಿ ಅಪ್ ಲೋಡ್ ಮಾಡಿರುವ ಪೋಟೋಗಳೆಲ್ಲವೂ ಸೂರ್ಯಾಸ್ತದ ಚಿತ್ರಗಳೇ. ಸೂರ್ಯೋದಯವನ್ನು ಕ್ಲಿಕ್ಕಿಸುವ ಪ್ಲ್ಯಾನ್ ಇದ್ದರೂ ಬೆಳಕು ಹ‌ರಿಯುವ ಮುನ್ನವೇ ಎದ್ದು,  ಚೆನ್ನಾಗಿ  ಸೂರ್ಯೊದಯ ಚೆನ್ನಾಗಿ ಗೋಚರಿಸುವ‌ ಜಾಗಕ್ಕೆ ಹೋಗಿ "ಗೆಟ್ ಸೆಟ್" ಅಂತಾ ಕ್ಯಾಮೆರಾ ಹಿಡಿದು ನಿಲ್ಲಲು ಸೋಮಾರಿತನ. ಆದರೆ ಪ್ಲ್ಯಾನಂತೂ ಇದೆ.

ಅಂದ ಹಾಗೆ ನನ್ನಲ್ಲಿದ್ದ ದಿನಕರ ಚೌಪದಿಯಲ್ಲಿ ದಿನಕರ ದೇಸಾಯಿಯವರು  (ದಿನಕರನೆಂದರೂ ಸೂರ್ಯನೇ :‍-)) ಅಂಕೋಲೆಯ ಸೂರ್ಯಾಸ್ತ‍-ಸೂರ್ಯೋದಯಗಳ ಬಗ್ಗೆ ಏನಾದರೂ ಚುಟುಕನ್ನು ಬರೆದಿದ್ದಾರೆಯೇ ಎಂಬ ಕೂತುಹಲದಲ್ಲಿ ನೋಡಿದಾಗ‌ ಯಾವ ಚುಟುಕಗಳೂ ಕಾಣಸಿಗಲಿಲ್ಲ. ಬಹುಶಃ ವರ್ಣಾನಾತೀತ ಎಂದು ಬಿಟ್ಟಿರಬಹುದು..:-)

Tuesday, July 16, 2013

ಪುನರಾಗಮನ‌..

ಬ್ಲಾಗ್ ಲೋಕವನ್ನು ಬಿಟ್ಟು ಸರಿಯಾಗಿ ನಾಲ್ಕು ವರ್ಷಗಳೇ ಆಗಿ ಹೋಗಿವೆ.. ಅನೇಕ ಹೊಸ ಹೊಸ ಅನುಭವಗಳು, ಅಂಕೋಲೆಯ ಸುತ್ತಲಿನ ಅನೇಕ ಸ್ಥಳಗಳನ್ನು ಸುತ್ತಿದರೂ ಅವುಗಳನ್ನು ಇಲ್ಲಿ ಹಂಚಿಕೊಳ್ಳಲಾಗಲಿಲ್ಲ. ಇಂದು ಪುನ: ಬ್ಲಾಗ್ ಮಡಿಲಿಗೆ ಬಂದಿರುವೆ..



ನನ್ನೂರಿನ ಗಂಗಾವಳಿಯ ಚಿತ್ರಗಳ ಮೂಲಕ ಈ ಹೊಸ ಪ್ರಯಾಣವನ್ನು ಶುರುಮಾಡಲು ಬಯಸಿದ್ದರಿಂದ ನದಿಯ ಕೆಲ ಫೋಟೋಗಳನ್ನು ಅಪ್ ಲೋಡ್ ಮಾಡಿದ್ದೇನೆ..