Showing posts with label Film. Show all posts
Showing posts with label Film. Show all posts

Thursday, October 9, 2008

ನಾನು ನೋಡಿದ ಚಿತ್ರ




ಕುಂದಾಪುರದ ಚಾರು "ನಾಯಕ್, Summer 2007 ಫಿಲ್ಮ್ ನೋಡು. ಒಳ್ಳೆಯದಿದೆ" ಎಂದು ಸುಮಾರು 3 ತಿಂಗಳ ಹಿಂದೆ ಯಾವುದೋ ಸೆಮಿನಾರ್ ನಲ್ಲಿ ಕುಳಿತಾಗ ಹೇಳಿದ್ದ. ಆದರೆ ಕಾಲ ಕೂಡಿ ಬಂದಿರಲಿಲ್ಲ ಹಾಗೂ ಆ ಚಿತ್ರವು ನನಗೆ ದೊರಕಲಿಲ್ಲ. ಮೊನ್ನೆ ಹೇಗೊ ಆಕಸ್ಮಿಕವಾಗಿ ದೊರಕಿದಾಗ ಅದನ್ನು ನೋಡೆ ತೀರಿಸೋಣ ಎಂದು ನೋಡಲು ಕುಳಿತೆ.
ಯಾವುದೋ ಮೆಡಿಕಲ್ ಕಾಲೇಜಿನಲ್ಲಿ ಶುರುವಾಗುವ ಈ ಚಿತ್ರ ಉತ್ತಮ ಸಂದೇಶವನ್ನು ಹೊಂದಿದೆ. ತಮ್ಮ ತಮ್ಮ ಕಾಲೇಜಿನಲ್ಲಿ ಯವುದೋ ಕಿರಿಕ್ ಮಾಡಿಕೊಂಡು , ಅದರಿಂದ ಬಚಾವಾಗಲು Rural Service ಮೇಲೆ ಮಹಾರಾಷ್ಟ್ರದ ಯಾವುದೋ ಹಳ್ಳಿಗೆ ಐದು ವಿದ್ಯಾರ್ಥಿಗಳು ತೆರಳುತ್ತಾರೆ.ಜನರ ಸಮಸ್ಯೆಯ ಗಂಧಗಾಳಿಯ ಪರಿಚಯವೇ ಇಲ್ಲದ ಇವರನ್ನು ಅಲ್ಲಿಯ ಸಮಸ್ಯೆ ಇವರನ್ನು ಪ್ರಜ್ಞಾವಂತ ನಾಗರೀಕರನ್ನಾಗಿ ಮಾಡುತ್ತದೆ.
ಆ ಊರಿನಲ್ಲಿ ಸಾಲದ ಹೊರೆಯಲ್ಲಿ ಸಿಕ್ಕಿ ಸಾವಿರಾರು ರೈತರು ಸಾಯುತ್ತಿರುತ್ತಾರೆ. ಅಲ್ಲಿಯ ಜನಜೀವನವು ಈ ವಿದ್ಯಾರ್ಥಿಗಳ ಮನೋಭಾವವನ್ನು ತಿದ್ದುತ್ತ ಹೋಗುತ್ತದೆ. ಸರಕಾರದಿಂದ ನಿರ್ಲಕ್ಷ ಪಟ್ಟ ಈ ಸಮಸ್ಯೆಗೆ ತಾವೇ ಪರಿಹಾರವನ್ನು ಅಲ್ಲಿಯೇ ನೆಲೆಸಿದ ಕೆಲ ಮುಖಂಡರ ಜೊತೆ ಹುಡುಕಲು ಪ್ರಯತ್ನಿಸುತ್ತಾರೆ.ಆದರೆ ಹೊಲಸು ರಾಜಕೀಯದಿಂದ ಇವರ ಪ್ರಯತ್ನ ವಿಫಲವಾಗುತ್ತದೆ. ಕೊನೆಯಲ್ಲಿ ದೇಶದ ಗಮನಕ್ಕೆ ಈ ಸಮಸ್ಯೆಯನ್ನು ತರಲು ನ್ಯಾಯಂಗಕ್ಕೆ ತನ್ನನ್ನು ಚಿತ್ರದ ನಾಯಕ ಒಪ್ಪಿಸಿಕೊಳ್ಳುತ್ತಾನೆ.ಆಶಿತೋಷ್ ರಾಣಾ ಅವರು ತಮ್ಮ ಪಾತ್ರದಿಂದ ಗಮನಸೆಳೆಯುತ್ತಾರೆ.