ನಾನು ಕರಾವಳಿ ಮತ್ತು ಪಶ್ಚಿಮಘಟ್ಟಗಳೆರಡನ್ನೂ ಹೊಂದಿದ ಕರ್ನಾಟಕದ ಬಾರ್ಡೋಲಿ ಅಂಕೋಲೆಯವನಾದರೂ ನನ್ನ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಮುಗಿಸಿದ್ದು ಸಮೀಪದ ಕಾರವಾರದ ಕೆರವಡಿಯಲ್ಲಿ.ಕೆರವಡಿ ಕಾರವಾರದಿಂದ ಸುಮಾರು ಮೂವತ್ನಾಲ್ಕು ಕಿ.ಮೀ ದೂರದಲ್ಲಿದ್ದು ಕಾಳಿ ನದಿಯ ಎಡ ದಂಡೆಯ ಮೇಲಿದೆ. ಆದ್ದರಿಂದ ಬೇಸಿಗೆ ರಜೆಯಲ್ಲಿ ಮತ್ತು ದಸರಾ ರಜೆಯಲ್ಲಿ ಮಾತ್ರವೇ ನಮ್ಮೂರಿಗೆ ಬರಲು ಸಾಧ್ಯವಾಗುತ್ತಿತ್ತು. ನನಗೆ ಅಂಕೋಲೆಯಲ್ಲಿ ಚೆನ್ನಾಗಿ ತಿಳಿದಿದ್ದ ಊರುಗಳೆಂದರೆ ಸೂರ್ವೆ(ನಮ್ಮೂರು) ಮತ್ತು ನಮ್ಮ ತಾಯಿಯ ತವರು ಮನೆ ಬೇಲೇಕೇರಿ. ಜಿ.ಸಿ.ಕಾಲೇಜಿನಲ್ಲಿ ಓದುವಾಗಲೂ ಅಂಕೋಲೆಯ ಇತರ ಊರುಗಳ ಬಗ್ಗೆ ತಿಳಿದುಕೊಳ್ಳಲು ಸಮಯ ಸಾಕಾಗಲಿಲ್ಲ ಮತ್ತು ತಿಳಿದುಕೊಳ್ಳುವ ಪ್ರಯತ್ನಕ್ಕೂ ಕೈಹಾಕಲಿಲ್ಲ ಎಂದೇ ಹೇಳಬಹುದು. ಆದರೆ ಯಾವಾಗ ಊರಿನಿಂದ ದೂರವಾದನೋ ಆಗ ಶುರುವಾಯಿತು ನೋಡಿ ಈ ಮಹಾಮಾರಿ ಕಾಯಿಲೆ 'ಅಂಕೋಲೆಯ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳುವುದು'.. ಮೊದಮೊದಲು ಬೆಂಗಳೂರಿಗೆ ಬಂದಾಗ "ಇಷ್ಟೊಂದ್ ಜನಾ ಇಲ್ಲಿ ಯಾರು ನಮೌರು? "ಎಂಬ ಆರ್ತನಾದ ಇನ್ನೂ ನಿಲ್ಲುವ ಸೂಚನೆಗಳನ್ನು ನೀಡುತ್ತಿಲ್ಲ. ಮೊದಲೇ ಹೇಳಿದಂತೆ ಅಂಕೋಲೆ ಸಹ್ಯಾದ್ರಿಯ ತಪ್ಪಲಿನಲ್ಲಿ ಮತ್ತು ಕಡಲಿನ ಕಿನಾರೆಯಲ್ಲಿ ಇರುವ ನಾಡು.ಆದ್ದರಿಂದ ಇದರ ಭೌಗೋಳಿಕ ಲಕ್ಷಣಗಳನ್ನೂ, ಗಂಗಾವಳಿ ನದಿಯ ಹರಿವನ್ನು ತಿಳಿಯುವ ಆಸೆ ಮೊದಲಿನಿಂದಲೂ ಇತ್ತು. ಆಗ ಸಹಾಯಕ್ಕೆ ಬಂದ ಬ್ರಹ್ಮಾಸ್ತ್ರ ಈ ವಿಕಿಮ್ಯಾಪಿಯಾ. ಅಂತರ್ಜಾಲದ ಹದ್ದಿನ ಕಣ್ಣು ಎಂದೇ ಕರೆಯಬಹುದಾದ ಈ ವೆಬ್ ಸೈಟ್ ಇಡೀ ಜಗತ್ತಿನ ಎಲ್ಲ ಭಾಗಗಳ ಮೇಲ್ಮೈ ಚಿತ್ರಣವನ್ನು ನಮಗೆ ಒದಗಿಸುತ್ತದೆ. ನನಗೆ ಅಂಕೋಲೆಯ ಬೆಟ್ಟದೂರುಗಳ ಬಗ್ಗೆ ಗಂಧ ಗಾಳಿಯೂ ತಿಳಿದಿರಲಿಲ್ಲ. ಕೊನೆಯ ಜುಲೈ ತಿಂಗಳಲ್ಲಿ ನಮ್ಮ ಸಂಬಂಧಿಕರ ಮನೆಗೆ ಹೋದಾಗಲೇ ನಾನು ಆ ಊರುಗಳನ್ನು ನೋಡಿದ್ದು.ಆದರೆ ಬಸ್ಸಲ್ಲಿ ಹೋಗಿದ್ದರಿಂದ ಪ್ರಕೃತಿಯ ಸಹಜ ಸೌಂದರ್ಯವನ್ನು ಸವಿಯಲಾಗಲಿಲ್ಲ. ಈ ಬಾರಿ ದೀಪಾವಳಿಗೆ ಈ ಎಲ್ಲ ಊರುಗಳನ್ನು ಸುತ್ತುವ ಯೋಜನೆಯನ್ನು ಹಾಕಿಕೊಂಡು ಹೋಗುತ್ತಿದ್ದೇನೆ.. ವಿಕಿಮ್ಯಾಪಿಯಾದಿಂದ ಎಲ್ಲ ಪ್ರಮುಖ ಲ್ಯಾಂಡ್ ಮಾರ್ಕ್ ಗಳನ್ನು, ಪ್ರಮುಖ ಪ್ರೇಕ್ಷಣಿಯ ಸ್ಥಳಗಳನ್ನು ಗುರುತಿಸಿಕೊಂಡು ಅವುಗಳನ್ನು ಭೇಟಿ ನೀಡುವ ಮಹದಾಸೆಯಿಂದ ಮನೆಗೆ ತೆರಳುತ್ತಿದ್ದೇನೆ. ನನ್ನ ಕಾರ್ಯಯೋಜನೆಯು ಫಲಿಸಿತೋ ಅಥವಾ ಟುಸ್ಸಾಯಿತೋ ಎಂದು ಮನೆಯಿಂದ ಬಂದ ನಂತರ ಬರೆಯುವೆ.
Friday, October 17, 2008
Sunday, October 12, 2008
ಮತ್ತೆ ಬರುತ್ತಿದೆ ದೀಪಾವಳಿ
ಸೆಪ್ಟೆಂಬರ್ ತಿಂಗಳು ಬಂದರೆ ಸಾಕು. ಮನೆಗೆ ಹೋಗುವ ದಿನಗಳಿಗೆ ಕೌಂಟ್ ಡೌನ್ ಶುರುವಾಗುತ್ತದೆ. ನಾನು ಕಳೆದ ಮೂರು ವರ್ಷಗಳಲ್ಲಿ ಯಾವ ಹಬ್ಬವನ್ನು ತಪ್ಪಿಸಿದರೂ ದೀಪಾವಳಿಯನ್ನು ತಪ್ಪಿಸಿಲ್ಲ. ಇಂಜಿನಿಯರಿಂಗನಲ್ಲಿ ಕೊನೆಯ ಬಾರಿ ದೀಪಾವಳಿಗೆ ಹೋಗಲು ಕೌಂಟ್ ಡೌನ್ ನಡೀತಾ ಇದೆ. ದೀಪಾವಳಿ ಸಮಯದಲ್ಲಿ ಕರ್ನಾಟಕದ ಬೇರೆ ಬೇರೆ ಪ್ರದೇಶಗಳಿಗೆ ಹೋಗುವ ಬಸ್ ಗಳ ಸಂಖ್ಯೆ ಹೆಚ್ಚುವುದರಿಂದ ಆಗುವ ಆ ಟ್ರಾಫಿಕ್, ಬಸ್ ನಲ್ಲಿ ಊರವರ ಮಾತುಗಳು, ಬಸ್ ಹೋಗಲು ತಡವಾದರೆ ಬಸ್ ನವರಿಗೆ ಅವರು ಆಡುವ ಅಣಕು ಮಾತುಗಳು ಇವೆಲ್ಲವೂ ತುಂಬ ನೆನಪನ್ನು ತರುತ್ತಿದೆ.
Thursday, October 9, 2008
ನಾನು ನೋಡಿದ ಚಿತ್ರ

ಕುಂದಾಪುರದ ಚಾರು "ನಾಯಕ್, Summer 2007 ಫಿಲ್ಮ್ ನೋಡು. ಒಳ್ಳೆಯದಿದೆ" ಎಂದು ಸುಮಾರು 3 ತಿಂಗಳ ಹಿಂದೆ ಯಾವುದೋ ಸೆಮಿನಾರ್ ನಲ್ಲಿ ಕುಳಿತಾಗ ಹೇಳಿದ್ದ. ಆದರೆ ಕಾಲ ಕೂಡಿ ಬಂದಿರಲಿಲ್ಲ ಹಾಗೂ ಆ ಚಿತ್ರವು ನನಗೆ ದೊರಕಲಿಲ್ಲ. ಮೊನ್ನೆ ಹೇಗೊ ಆಕಸ್ಮಿಕವಾಗಿ ದೊರಕಿದಾಗ ಅದನ್ನು ನೋಡೆ ತೀರಿಸೋಣ ಎಂದು ನೋಡಲು ಕುಳಿತೆ.
ಯಾವುದೋ ಮೆಡಿಕಲ್ ಕಾಲೇಜಿನಲ್ಲಿ ಶುರುವಾಗುವ ಈ ಚಿತ್ರ ಉತ್ತಮ ಸಂದೇಶವನ್ನು ಹೊಂದಿದೆ. ತಮ್ಮ ತಮ್ಮ ಕಾಲೇಜಿನಲ್ಲಿ ಯವುದೋ ಕಿರಿಕ್ ಮಾಡಿಕೊಂಡು , ಅದರಿಂದ ಬಚಾವಾಗಲು Rural Service ಮೇಲೆ ಮಹಾರಾಷ್ಟ್ರದ ಯಾವುದೋ ಹಳ್ಳಿಗೆ ಐದು ವಿದ್ಯಾರ್ಥಿಗಳು ತೆರಳುತ್ತಾರೆ.ಜನರ ಸಮಸ್ಯೆಯ ಗಂಧಗಾಳಿಯ ಪರಿಚಯವೇ ಇಲ್ಲದ ಇವರನ್ನು ಅಲ್ಲಿಯ ಸಮಸ್ಯೆ ಇವರನ್ನು ಪ್ರಜ್ಞಾವಂತ ನಾಗರೀಕರನ್ನಾಗಿ ಮಾಡುತ್ತದೆ.
ಆ ಊರಿನಲ್ಲಿ ಸಾಲದ ಹೊರೆಯಲ್ಲಿ ಸಿಕ್ಕಿ ಸಾವಿರಾರು ರೈತರು ಸಾಯುತ್ತಿರುತ್ತಾರೆ. ಅಲ್ಲಿಯ ಜನಜೀವನವು ಈ ವಿದ್ಯಾರ್ಥಿಗಳ ಮನೋಭಾವವನ್ನು ತಿದ್ದುತ್ತ ಹೋಗುತ್ತದೆ. ಸರಕಾರದಿಂದ ನಿರ್ಲಕ್ಷ ಪಟ್ಟ ಈ ಸಮಸ್ಯೆಗೆ ತಾವೇ ಪರಿಹಾರವನ್ನು ಅಲ್ಲಿಯೇ ನೆಲೆಸಿದ ಕೆಲ ಮುಖಂಡರ ಜೊತೆ ಹುಡುಕಲು ಪ್ರಯತ್ನಿಸುತ್ತಾರೆ.ಆದರೆ ಹೊಲಸು ರಾಜಕೀಯದಿಂದ ಇವರ ಪ್ರಯತ್ನ ವಿಫಲವಾಗುತ್ತದೆ. ಕೊನೆಯಲ್ಲಿ ದೇಶದ ಗಮನಕ್ಕೆ ಈ ಸಮಸ್ಯೆಯನ್ನು ತರಲು ನ್ಯಾಯಂಗಕ್ಕೆ ತನ್ನನ್ನು ಚಿತ್ರದ ನಾಯಕ ಒಪ್ಪಿಸಿಕೊಳ್ಳುತ್ತಾನೆ.ಆಶಿತೋಷ್ ರಾಣಾ ಅವರು ತಮ್ಮ ಪಾತ್ರದಿಂದ ಗಮನಸೆಳೆಯುತ್ತಾರೆ.
Subscribe to:
Posts (Atom)